ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜ್‍ನ ಹಿಜಬ್ ವಿವಾದ ತಾರ್ಕಿಕ ಅಂತ್ಯ ಕಂಡಿದೆ. ಕಾಲೇಜ್‍ನಲ್ಲಿ ಹಿಜಬ್ ನಿಯಮ ಪಾಲಿಸಲಾಗುತ್ತಿಲ್ಲ ಅಂತ ಆರೋಪಿಸಿ ದಿಢೀರ್ ಆಗಿ ವಿದ್ಯಾರ್ಥಿಗಳು ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ತಿರುಗಿ ಬಿದ್ದಿದ್ದರು. ಇದರಿಂದ ಎಚ್ಚೆತ್ತ ಕಾಲೇಜ್ ಆಡಳಿತ ಮಂಡಳಿ ನಡೆಸಿದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹೈಕೋರ್ಟ್ ಆದೇಶದಂತೆ ಸಮವಸ್ತ್ರದ ನಿಯಮ ಇರುವ ಕಾಲೇಜಿನಲ್ಲಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ತರಗತಿಗಳಿಗೆ ಪ್ರವೇಶ ಇಲ್ಲ. ಬುರ್ಖಾ, ಹಿಜಬ್ ಧರಿಸಿ ಕಾಲೇಜ್ ಕ್ಯಾಂಪಸ್‍ಗೆ ಬರಬಹುದು. ಆದ್ರೆ ತರಗತಿ, ಗ್ರಂಥಾಲಯಕ್ಕೆ ಹಿಜಬ್ ಧರಿಸಿ ಬರುವಂತಿಲ್ಲ ಅಂತ ವಿವಿ ಉಪಕುಲಪತಿ ಡಾ. ಸುಬ್ರಹ್ಮಣ್ಯ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಾಸಕ ವೇದವ್ಯಾಸ ಕಾಮತ್ ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ, ಐನ್‍ಸ್ಟೈನ್ ರೀತಿ ಮನೆಯಲ್ಲೇ ಕೂತು ಓದ್ತೇವೆ ಅಂತ ಹೇಳಿರೋ ಮಂಗಳೂರಿನ ಹಿಜಬ್ ವಿದ್ಯಾರ್ಥಿನಿಯರು ಏನ್ ಮಾಡ್ತಾರೋ ನೋಡ್ಬೇಕು. ಅಂದಹಾಗೆ, ಉಡುಪಿಯ 6 ವಿದ್ಯಾರ್ಥಿನಿಯರು, ಮಂಡ್ಯದ ಮುಸ್ಕಾನ್ `ಹಿಜಬ್ ನಮ್ಮ ಹಕ್ಕು' ಪರೀಕ್ಷೆಯನ್ನೇ ಬರೆಯಲಿಲ್ಲ.
#HRRanganath #NewsCafe #PublicTV #HijabRow